Wednesday, February 14, 2018

ಆರನೂರು ಮಾಸಗಳ ಹಿಂದೆ ನಮ್ಮ  ಮಿಲನ, 
  ಅಂದಿನಿಂದ ಜೊತೆ ಜೊತೆ ಸಾಗಿದೆ ಜೀವನ.                ಅಂದು ನೋಡಿದಾಗ ಹಾಲುಗೆನ್ನೆಯ ಚೆಲುವೆ,        ಇಂದಿಗೂ ಮನದಾಳದಲ್ಲಿ ಅಡಗಿದೆ ಆ ಚಿತ್ರ ಓ ನನ್ನ ಒಲುಮೆ.                                                               
ನನ್ನ ಬೊಗದಲಿತ್ತು ನಿನ್ನಾಯಸ . ನಿನ್ನ ಆಶಯದಲ್ಲಿತು ನನ್ನ ಪ್ರಯಾಸ.                                                           
   ನನ್ನ ಆಲೋಚನೆಗಳಿಗೆ ನೀನೇ ಸ್ಫೂರ್ತಿ.ನಿನ್ನ ಸಾಧನೆ ಹಿಂದೆ ನಾನೇ ಮೂರ್ತಿ.                                               ಸುಖಗಳು ಜಾರಿಹವು,ದುಃಖಗಳು ಎರಿಹವು ಜೊತೆಗಿರುವ ಕೈಗಳು ಬಲವಾಗಿ ಹಿಡಿದಿಹವು,
ಎರಡು ಜೀವ ಎರಡು ಆತ್ಮಹೋಗಿ,ಒಂದು ಜೀವ ಒಂದಾತ್ಮ ಆಗಿಹೆವು. 
ಜೀವನದಿ ಇದು ವರ್ಣನೆಗೆ ಮೀರಿದಾನಂದ. ಕೊನೆಗಳಿಗೆವರೆಗೂ ಇರಲಿ ಈ ಅನುಬಂಧ.                           (ನನ್ನ ಸೋದರತ್ತೇ  50ವರ್ಷ ದಾಂಪತ್ಯ ತಲುಪಿದ ಪ್ರಯುಕ ನನ್ನ ಮಾವ ಹೀಗೆ ಹೇಳಲಿ ಎಂಬ ಆಶಯದೊಂದಿಗೆ☺)

Friday, February 2, 2018

ನಿನ್ನ ಮೌನ ಮಾತಿನಲ್ಲಿ ನಾ ಕೇಳಬಲ್ಲೇ ನಿನ್ನ ಒಲವು ಓ ಗೆಳಯ,
ನಿನ್ನ ಕಣ್ಣ ನೋಟದಲ್ಲೇ ನಾ ಕಾಣಬಲ್ಲೆ ನಿನ ಪ್ರೀತಿ ಓ ಗೆಳಯ.

 ನೂರಾರು ಬಾರಿ ನನಗೆ ನಾ  ಕೇಳುತಿರುವೆ,
 ಯಾವ ಪುಣ್ಯದಿಂದ ನೀ ನನಗೆ ದೊರೆತೇ,
ಎಂದಿಗೂ ಆಗದಿರಲಿ ನನಗೆ ನಿನ್ನ ಕೊರತೆ,
ಅದ ಈ ಮನ  ಬಯಸಿದೆ ಓ ಗೆಳಯ.

 ನನ್ನಿ ಹೃದಯದ ಮಿಡಿತ, ಮನದಾಳದ ತವಕ,
ಹೇಳುತಿವೆ ನೀನಿರಬೇಕು
ನನ್ನ ಜೊತೆ ಕೊನೆತನಕ