ನಮ್ಮನು ದಿನ ನಿತ್ಯ ಕರೆದುಕೊಂಡು ಹೋಗುವ ಚಾಲಕರ ಸ್ಮರಣೆ. ಹಳ್ಳ ,ದಿಣ್ಣೆಗಳ ಗೊಡವೆ ಇಲ್ಲ ನಮಗೆ,
ಸಂದಿ, ಪಂದಿಗಳ ಅರಿವಿಲ್ಲ ನಮಗೆ,
ಗಡಿ ಮುಟ್ಟು ವುದೇ ನಮ್ಮ ಗುರಿ, ರಸ್ತೆ ಸೈನಿಕರು ನಾವು,ರಸ್ತೆ ಸೈನಿಕರು.
ಮುಂದಿರುವರ ಹಿಂದೆ ನೂಕುತ,
ಆಕ್ಕ ಪಕ್ಕದವರನು ಮತ್ತಷ್ಟು ಜಾಡಿಸುತ,
ಶಬ್ದ ಮಾಲಿನ್ಯಕ್ಕೆ ನಮ್ಮದೊಂದಷ್ಟು ಬೊಗಳಿಕೆಯ ಸೇರಿಸುತ
ಗುರಿ ಮುಟ್ಟುವೆವು ನಾವು. ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು.
ಹಗಲಾಗಲಿ,ಇರುಳಾಗಲಿ,ಕಾಯಕಕೆ ದುಮುಕಿದರೆ ಮುಂದೆ ನುಗುತ್ತಲೇ ಇರೆವೆವು ನಾವು
ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು.
ನಮ್ಮ ನಿಲ್ದಾಣ ಬಹು ಜೀವಿಗಳ ತಂಗುದಾಣ.
ಅವರ ನೆಲೆ ಮುಟ್ಟಿಸುವುದರಲ್ಲೇ
ನಮಗೆ ಸಮಾಧಾನ,
ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು.
ನುಗ್ಗಿದರೆ ವಾಹನಗಳ ಸೆಲೇ, ಆಗುವುದು ಆಗಾಗ ನಮ್ಮ ಕೊಲೆ,
ಮೇಲೆ ಬೀಳದು ಯಾವುದೇ ಮಾಲೆ,
ನಂಬಿದವರಿಗಷ್ಟೇ ಬಲು ಕಷ್ಟದ ಬಾಳೆ, ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು
ನಿಮ್ಮ ಯಾತ್ರದಲ್ಲಿ ಇದೆ ಸ್ವಲ್ವ ನಮ್ಮ ಪಾತ್ರ.
ಕಿಂಚಿತ್ತಾದರು ಸ್ಮರಣೆಯಾದಾರೆ ಮಾತ್ರ
ಈ ಬದುಕಿಗೆ ಇದೆ ಒಂದಷ್ಟು ಅರ್ಥ ,

No comments:
Post a Comment