ದೇಶಕ್ಕಾಗಿ ಮಡಿದಿರಿ ನೀವೆಂದು ಹೇಳುವೆವು ನಾವೆಲ್ಲ.
ಈ ಮಾತಿನಲಿ ನಿಮ್ಮ ಆತ್ಮಕ್ಕೆ ತೃಪ್ತಿ ಇದೆಯೋ ತಿಳಿದಿಲ್ಲ.
ದೇವರಿಗೆ ಹಚ್ಚಿದ ದೀಪದಂತಿತ್ತು ನಿಮ್ಮ ದೇಶ ಭಕ್ತಿ.
ಎಣ್ಣೆ ಕರಗುವ ಮುನ್ನವೇ ಉಡುಗಿತು ನಿಮ್ಮ ಶಕ್ತಿ.
ನಿಮ್ಮ ಹೆಸರಿನಲ್ಲಿ ಬೆಳಗುವುದು ಒಂದಷ್ಟು ಮೇಣದ ಬತ್ತಿ
ಮರೆವೆವು ನಿಮ್ಮನ್ನು ಕಾಲದ ಬೆನ್ನ ಹತ್ತಿ.
ನಿಮ್ಮ ಹೆಸರಿಗೆ, ಚಿತ್ರಕ್ಕೆ ಕೊಟ್ಟು ಪ್ರಚಾರ,ಹಾಕುವರು ಹಾರ,
ಕೊಟ್ಟು ಅಲ್ಪ ಪರಿಹಾರ,ಮಾಡುವರು ತಮ್ಮ ವ್ಯವಹಾರ
ನಿಮ್ಮ ಬದುಕು ಆಗಿದೆ ಹಲವಾರು ಜನರಿಗೆ ವ್ಯಾಪಾರ .
ಮನುಕುಲದ ಸುತ್ತ ಬದುಕಲು ಹಾಕಿಕೊಂಡಾಗ ವೃತ್ತ
ನಿರಂತರ ಸಾಗುವುದು ಬಹು ಜೀವ ವ್ಯರ್ಥ.
ಕ್ಷಮಿಸಿ ಎಂದು ಕೇಳಿದರೆ ಎಲ್ಲಿದೆ ಕೊನೆ.
ಶಿಕ್ಷೆ ನೀಡಿ ಅನ್ನುವುದು ಬರಿ .
ನಿಮ್ಮ ನೆನಪಲ್ಲಿ ಆಷ್ಟೇ, ಸ್ವಲ್ಪ ಶಬ್ದಗಳ ಪರಿಯಟನೆ

No comments:
Post a Comment