I could listen to Bhajan which my grandmother, use to sing,it opened my thoughts, so is this post.
I came back from noise knocked door,to hear this voice, Suddenly got remembrance, Felt grandma appearance, Run thru mind memory tide I cannot hide,inked to reach wide. I aspire,you get inspire do not allow memory to expire express love before retire.
ಮುಸ್ಸಂಜೆಯ ತಿಳಿಗಾಳಿಯಲ್ಲಿ ತಟ್ಟಿದೆ ಮನೆಬಾಗಿಲು. ತಂಗಾಳಿಯಲಿ ತೇಲಿಬಂತು ಭಜಿಸುವ ಸಾಲುಗಳು, ಶ್ರವಣಕಾಯಿತು ಇಂಪು ,ಹಗುರವಾಯಿತು ಮನವು, ತುಂಬಿ ಬಂತು ಕಂಗಳು ಮೂಡಿತು ನಿನ್ನ ನೆನಪಿನ ಹಾಳೆಗಳು.
ಆ ಭಜನೆಯ ಸಾಲು ಆಗಿತ್ತು ನಿನ್ನ ದಿನಚರಿಯ ಪಾಡು . ಹಾಡು ಸಾಗಿದ ಹಾಗೆ ಬಿಚ್ಚಿತು,ನನ್ನ ನೆನಪಿನ ಬೀಡು.
ನಿನಗೂ ಇತ್ತು ಸಹಜವಾದ ಸ್ವಾರ್ಥ,ಅದ್ದರಲಿತ್ತು ನನಗಾಗಿ ವಾತ್ಸಲ್ಯದ ಪಾತ್ರ. ಹುಡುಕಿದರೂ ಸಿಗದು ನನ್ನ ಸ್ವಾರ್ಥದಲಿ ನಿನ್ನ ನಿಸ್ವಾರ್ಥ.
ಆಡುವವನಿಗೆ ರಾಮನ ಪರಿಚಯಿಸಿದವಳು ನೀನು, ಭೀಮನ ಶಕ್ತಿ ತುಂಬಿದವಳು ನೀನು, ಕೃಷ್ಣನ ಕೀಟಲೆ ನನ್ನಲ್ಲಿ ಕಂಡು ಆನಂದಿಸಿದವಳು ನೀನು ನಗುವ ಹಾಲು ಮೊಗದ ಚಂದಿರನ ತೋರುತ್ತ ,ಕೈ ತುತ್ತಿನಲಿ ಜೀವಸತ್ವವ ತುಂಬುತ್ತ ನನ್ನ ಬೆಳವಣಿಗೆಯ ಪಾಲುದಾರಳು ನೀನು,
ತಲಮಳದಮ್ಮನ ಯೋಚನೆಗಳಿಗೆ ,ಎತ್ತಿ ದಂಡಿಸುವ ಕೈಗಳಿಗೆ ತಡೆಯೊತ್ತಿ ನನ್ನ ಆಟಪಾಟಗಳಿಗೆ ಕನಸು ಬಿತ್ತಿ ನನಸಾಗಿಸಿದವಳು ನೀನು. ಪಲ್ಲವಿಯಲಿ ನೀ ಮಾಡಿದೆ ಪಾಠ ,ಅದರಿಂದಾಗುತ್ತಿದೆ ಚರಣದ ಓಟ. ಅದರಲ್ಲಿ ನಾನೊಂದು ಅರಿತೆ ,ಕಾಡುವುದು ಸದಾ ನಿನ್ನ ಕೊರತೆ.
ಕಾಣದಿದ್ದರೂ ಕಣ್ಣುಗಳಲಿ,ತುಂಬಿರು ಸದಾ ಚಲನವನಗಳಲಿ, ಉಸಿರು ನಿಲ್ಲುವ ಕ್ಷಣದಲೂ ,ತುಂಬು ನೀ ಮನದಲಿ. ಬರುವೆ ನಾ ಸಂತಸದಲಿ.

No comments:
Post a Comment