Tuesday, November 28, 2017

Now a days I need to go by cab to office, this is pain as well as advantage, I got this photo in family what's App group posted by my wife  today morning and my thoughts on that picture on way to office in cab.
 Priye,
  Surya Chandrara notadali,
   Niremba Hasigeyali, Akashavemba Hodikeyali,
   Samsara Noukeyali.
Namma payana, Ninu Navika
                            Nanu Sevaka.
   (enlarge and view photo to relate write-up and picture) 
ಪ್ರಿಯೆ,
ಸೂರ್ಯ  ಚಂದಿರ ನೋಟದಲಿ
ನೀರೆಂಬ ಹಾಸಿಗೆಯಲ್ಲಿ,ಆಕಾಶವೆಂಬ ಹೊದಿಕೆಯಲಿ 
ಸಂಸಾರ ನೌಕೆಯಲಿ, ನಮ್ಮ ಪಯಣ
ನೀನು ನಾವಿಕ , ನಾನು ಸೇವಕ

ನಮ್ಮನು ದಿನ ನಿತ್ಯ ಕರೆದುಕೊಂಡು ಹೋಗುವ ಚಾಲಕರ ಸ್ಮರಣೆ.                                                      ಹಳ್ಳ ,ದಿಣ್ಣೆಗಳ ಗೊಡವೆ ಇಲ್ಲ ನಮಗೆ,
ಸಂದಿ, ಪಂದಿಗಳ ಅರಿವಿಲ್ಲ ನಮಗೆ,
ಗಡಿ ಮುಟ್ಟು ವುದೇ ನಮ್ಮ ಗುರಿ,                                   ರಸ್ತೆ ಸೈನಿಕರು ನಾವು,ರಸ್ತೆ ಸೈನಿಕರು.
ಮುಂದಿರುವರ ಹಿಂದೆ ನೂಕುತ, 
ಆಕ್ಕ ಪಕ್ಕದವರನು ಮತ್ತಷ್ಟು ಜಾಡಿಸುತ,
ಶಬ್ದ ಮಾಲಿನ್ಯಕ್ಕೆ ನಮ್ಮದೊಂದಷ್ಟು ಬೊಗಳಿಕೆಯ ಸೇರಿಸುತ
 ಗುರಿ ಮುಟ್ಟುವೆವು ನಾವು.                                            ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು.
 ಹಗಲಾಗಲಿ,ಇರುಳಾಗಲಿ,ಕಾಯಕಕೆ ದುಮುಕಿದರೆ ಮುಂದೆ ನುಗುತ್ತಲೇ ಇರೆವೆವು ನಾವು 
 ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು. 
 ನಮ್ಮ ನಿಲ್ದಾಣ ಬಹು ಜೀವಿಗಳ ತಂಗುದಾಣ.
 ಅವರ ನೆಲೆ ಮುಟ್ಟಿಸುವುದರಲ್ಲೇ
 ನಮಗೆ ಸಮಾಧಾನ,
ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು.
ನುಗ್ಗಿದರೆ ವಾಹನಗಳ ಸೆಲೇ,                                            ಆಗುವುದು ಆಗಾಗ ನಮ್ಮ ಕೊಲೆ, 
ಮೇಲೆ ಬೀಳದು ಯಾವುದೇ ಮಾಲೆ,   
ನಂಬಿದವರಿಗಷ್ಟೇ ಬಲು ಕಷ್ಟದ ಬಾಳೆ,                           ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು 
 ನಿಮ್ಮ ಯಾತ್ರದಲ್ಲಿ ಇದೆ ಸ್ವಲ್ವ ನಮ್ಮ ಪಾತ್ರ.
ಕಿಂಚಿತ್ತಾದರು ಸ್ಮರಣೆಯಾದಾರೆ ಮಾತ್ರ
ಈ ಬದುಕಿಗೆ ಇದೆ ಒಂದಷ್ಟು ಅರ್ಥ ,
ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು.
ಹಾಗೆ ಸುಮ್ಮನೆ ಈ ಕಾಲಕ್ಕೆ ಹೊಂದುವಂತೆ ಒಂದು ರೊಮ್ಯಾಂಟಿಕ್ ಗೀತೆ ಬರೆಯುವ ಪ್ರಯತ್ನ                  Facebookನಲ್ಲಿ ಕಣ್ಣಿಗೆ ಬಿತ್ತು ನಿನ್ನ smily face.              ಆಗ್ಲೇ ಆಯ್ತು ನಂಗೆ ನಿನ್ಮೇಲೆ love please.                    Decide ಮಾಡ್ದೆ ನನ್ನ lifeಗೇ ನೀನೇ master piece.                                                               ,,,,,1.                                                                         Coffee shopನಲ್ಲಿ ನನ್ನ ನಿನ್ನ ಮಿಲನ,                                                 ವಾಟ್ಸಾಪ್ ನಲ್ಲಿ ನಮ್ಮ ಪ್ರೇಮ ಪಯಣ,         ಆಡಬೇಕು ನಾವಿಬ್ಬರು duet,                              ಅದಕ್ಕಾಗಿ Twitterನಲ್ಲಿ ನಾ quiet.    ,,,,,,,,,,,2                                                                            our love is pride ,to prove let,'s take a ride,.    Bangalore to London let,'s go by country side.                                                 In life's venture,our love is an adventure.       ,,,,,,,,,,,   3                                                                                                               ನೀ ದೇವರು ಕಡೆದ ಸುಂದರ ಮೂರ್ತಿ,                           ಆಗು ನನ್ನ ಬದುಕಿಗೆ ಸ್ಫೂರ್ತಿ,                                        ನಿನ್ನಾಸೆ ತೀರಿಸಲೇ ಕಳೆಯಲಿ ನನ್ನ ಹಗಲು ರಾತ್ರಿ.,,,,,,,,,,,4
ಬದುಕು ಭಾವನೆಗಳ ಪ್ರಪಂಚ, 
ಅದರೊಳಗೆ ನಮ್ಮೊಲುಮೆ ಅನಂತ,
ಬದುಕು ಬಾವನೆಗಳ ಪ್ರಪಂಚ,,,,,,,,,,,,,,1
ಕಣ್ಣಿನ ನೋಟದಾ ರೀತಿ       
ಮೂಡುವುದು ಬಗೆ ಬಗೆಯ ಪ್ರೀತಿ ,
ಆಸೆ ನಿರಾಸೆಗಳ ಸಂಗಮ  ಸುಖ ದುಃಖಗಳಾಲಿಂಗನ
       ಬದುಕು ಭಾವನೆಗಳ     ಪ್ರಪಂಚ, ,,,,,,,,2
  ಬವಣೆಗಳೆ ಆಗಿರಲಿ ನಿತ್ಯದ ಬೆಳವಣಿಗೆ,
ಹತ್ತಿರವ ಬಯೇಸುವೆವು ಒಂದ ಅರಘಳಿಗೆ
ನುಡಿಯಲ್ಲಿ ಕಾತರಿಸುವೆವು ಒಂದಿಷ್ಟು ನಲುಮೆ
ಬದುಕು ಭಾವನೆಗಳ ಪ್ರಪಂಚ,  ,,,,,,,3
ತಲೆಯಲ್ಲಿ ನಡೆದಿರಲಿ  ಚಿಂತನೆಯ ಕ್ರಾಂತಿ,     ಸನಿಹದಲ್ಲಿ ಕಾಣುವೆವು ಸ್ವಲ್ಪ ಶಾಂತಿ,ವ್ಯಸನಗಳಿಗೊಂದಿಷ್ಟು ವಿಶ್ರಾಂತಿ
ಬದುಕು ಭಾವನೆಗಳ ಪ್ರಪಂಚ, ,,,,,,,4

Monday, March 13, 2017

I could listen to Bhajan which my grandmother, use to sing,it opened my thoughts, so is this post.
I came back from noise knocked door,to hear this voice, Suddenly got remembrance, Felt grandma appearance, Run thru mind memory tide I cannot hide,inked to reach wide. I aspire,you get inspire do not allow memory to expire express love before retire.
ಮುಸ್ಸಂಜೆಯ ತಿಳಿಗಾಳಿಯಲ್ಲಿ ತಟ್ಟಿದೆ ಮನೆಬಾಗಿಲು.  ತಂಗಾಳಿಯಲಿ ತೇಲಿಬಂತು ಭಜಿಸುವ ಸಾಲುಗಳು,  ಶ್ರವಣಕಾಯಿತು ಇಂಪು ,ಹಗುರವಾಯಿತು ಮನವು, ತುಂಬಿ ಬಂತು ಕಂಗಳು  ಮೂಡಿತು ನಿನ್ನ ನೆನಪಿನ ಹಾಳೆಗಳು.
ಆ ಭಜನೆಯ ಸಾಲು ಆಗಿತ್ತು ನಿನ್ನ ದಿನಚರಿಯ ಪಾಡು . ಹಾಡು ಸಾಗಿದ ಹಾಗೆ ಬಿಚ್ಚಿತು,ನನ್ನ ನೆನಪಿನ ಬೀಡು.
ನಿನಗೂ ಇತ್ತು ಸಹಜವಾದ ಸ್ವಾರ್ಥ,ಅದ್ದರಲಿತ್ತು ನನಗಾಗಿ ವಾತ್ಸಲ್ಯದ ಪಾತ್ರ.  ಹುಡುಕಿದರೂ ಸಿಗದು ನನ್ನ ಸ್ವಾರ್ಥದಲಿ ನಿನ್ನ ನಿಸ್ವಾರ್ಥ.
ಆಡುವವನಿಗೆ ರಾಮನ ಪರಿಚಯಿಸಿದವಳು ನೀನು,  ಭೀಮನ ಶಕ್ತಿ ತುಂಬಿದವಳು ನೀನು, ಕೃಷ್ಣನ ಕೀಟಲೆ ನನ್ನಲ್ಲಿ ಕಂಡು ಆನಂದಿಸಿದವಳು ನೀನು ನಗುವ ಹಾಲು ಮೊಗದ ಚಂದಿರನ ತೋರುತ್ತ ,ಕೈ ತುತ್ತಿನಲಿ ಜೀವಸತ್ವವ ತುಂಬುತ್ತ  ನನ್ನ ಬೆಳವಣಿಗೆಯ ಪಾಲುದಾರಳು ನೀನು,
ತಲಮಳದಮ್ಮನ ಯೋಚನೆಗಳಿಗೆ ,ಎತ್ತಿ ದಂಡಿಸುವ ಕೈಗಳಿಗೆ ತಡೆಯೊತ್ತಿ  ನನ್ನ ಆಟಪಾಟಗಳಿಗೆ ಕನಸು ಬಿತ್ತಿ ನನಸಾಗಿಸಿದವಳು ನೀನು. ಪಲ್ಲವಿಯಲಿ ನೀ ಮಾಡಿದೆ ಪಾಠ ,ಅದರಿಂದಾಗುತ್ತಿದೆ ಚರಣದ ಓಟ. ಅದರಲ್ಲಿ ನಾನೊಂದು ಅರಿತೆ ,ಕಾಡುವುದು ಸದಾ ನಿನ್ನ ಕೊರತೆ.
ಕಾಣದಿದ್ದರೂ ಕಣ್ಣುಗಳಲಿ,ತುಂಬಿರು ಸದಾ ಚಲನವನಗಳಲಿ, ಉಸಿರು ನಿಲ್ಲುವ ಕ್ಷಣದಲೂ ,ತುಂಬು ನೀ ಮನದಲಿ. ಬರುವೆ ನಾ ಸಂತಸದಲಿ.
ದೇಶಕ್ಕಾಗಿ ಮಡಿದಿರಿ ನೀವೆಂದು ಹೇಳುವೆವು ನಾವೆಲ್ಲ.
ಈ ಮಾತಿನಲಿ ನಿಮ್ಮ ಆತ್ಮಕ್ಕೆ ತೃಪ್ತಿ ಇದೆಯೋ ತಿಳಿದಿಲ್ಲ.

 ದೇವರಿಗೆ ಹಚ್ಚಿದ ದೀಪದಂತಿತ್ತು ನಿಮ್ಮ ದೇಶ ಭಕ್ತಿ.
 ಎಣ್ಣೆ ಕರಗುವ ಮುನ್ನವೇ ಉಡುಗಿತು ನಿಮ್ಮ ಶಕ್ತಿ.
 ನಿಮ್ಮ ಹೆಸರಿನಲ್ಲಿ  ಬೆಳಗುವುದು ಒಂದಷ್ಟು ಮೇಣದ ಬತ್ತಿ
 ಮರೆವೆವು ನಿಮ್ಮನ್ನು ಕಾಲದ ಬೆನ್ನ ಹತ್ತಿ.

ನಿಮ್ಮ ಹೆಸರಿಗೆ, ಚಿತ್ರಕ್ಕೆ ಕೊಟ್ಟು  ಪ್ರಚಾರ,ಹಾಕುವರು ಹಾರ,
ಕೊಟ್ಟು ಅಲ್ಪ ಪರಿಹಾರ,ಮಾಡುವರು ತಮ್ಮ ವ್ಯವಹಾರ
ನಿಮ್ಮ ಬದುಕು ಆಗಿದೆ ಹಲವಾರು   ಜನರಿಗೆ  ವ್ಯಾಪಾರ .

ಮನುಕುಲದ ಸುತ್ತ ಬದುಕಲು ಹಾಕಿಕೊಂಡಾಗ ವೃತ್ತ

ನಿರಂತರ ಸಾಗುವುದು  ಬಹು ಜೀವ ವ್ಯರ್ಥ.
 ಕ್ಷಮಿಸಿ ಎಂದು ಕೇಳಿದರೆ  ಎಲ್ಲಿದೆ ಕೊನೆ.
 ಶಿಕ್ಷೆ ನೀಡಿ   ಅನ್ನುವುದು ಬರಿ .
ನಿಮ್ಮ ನೆನಪಲ್ಲಿ ಆಷ್ಟೇ,  ಸ್ವಲ್ಪ  ಶಬ್ದಗಳ ಪರಿಯಟನೆ